21st September 2023

On 21st September 2023 @ TapOvanam, Hiremath, Tumkur >>>>>>>>>>>>>>>>>>>>>>>>>> ಶ್ರೀ ಶಿವಾನಂದ ಮರಿಗುದ್ದಿಯವರ ನಿಧನಕ್ಕೆ ತುಮಕೂರು ಹಿರೇಮಠದ ಶ್ರೀ ಶ್ರೀಗಳವರ ಭಾವಪೂರ್ಣ ಶ್ರದ್ಧಾಂಜಲಿ >>>>>>>>>>>>>>>>>>>>>>>>>> “ದೇವರಾಗಿದ್ದರೆ ನಾವು ಎಲ್ಲವನ್ನೂ ಸರಿ ಮಾಡುತ್ತೇವೆ” ಎಂದು ನಾವುಗಳು ಅಂದುಕೊಳ್ಳುತ್ತೇವೆ. ಆದರೆ ಆ ದೇವರಾದವನು ಕೂಡ ಎಲ್ಲವನ್ನೂ ಸರಿಮಾಡುವುದಿಲ್ಲ ಮತ್ತು ಆತ ಮಾಡುವುದೆಲ್ಲವೂ ಸರಿ ಇರುವುದಿಲ್ಲ ಎಂಬ ವಿಚಾರವಿದು ಎಲ್ಲರಿಗೂ ಗೊತ್ತಿರುವ ವಿಷಯ. ದೇವರು ಒಮ್ಮೊಮ್ಮೆ ತುಂಬ ನಿರ್ದಯವಾಗಿ ನಡೆದುಕೊಳ್ಳುತ್ತಾನೆ. ಆತ ತುಂಬ ಅನ್ಯಾಯ ಮಾಡುತ್ತಾನೆ. ಆತ ತನಗಿರುವ ಕರ್ತುಂ, ಅಕರ್ತುಂ ಮತ್ತು ಅನ್ಯಥಾ ಕರ್ತುಂ ಶಕ್ತಿ, ಸಾಮರ್ಥ್ಯದ ದುರುಪಯೋಗಮಾಡಿಕೊಳ್ಳುತ್ತಾನೆ. ದೇವರಾದ ಮಾತ್ರಕ್ಕೆ ಏನೆಲ್ಲ ಮಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡಿದ್ದರೆ ಅದು ಖಂಡಿತ ತಪ್ಪು. ದೇವರು ತನಗೆ ತಿಳಿದ ಹಾಗೆಲ್ಲ ಮಾಡುವುದಕ್ಕೆ ದೇವರಾಗಿಲ್ಲವೆಂದು ತಿಳಿದುಕೊಂಡರೆ ಸರಿ...